[Wikikn-l (kannada wikipedia)] ಕನ್ನಡ ವಿಕಿಪೀಡಿಯದಲ್ಲಿ ಚಲನಚಿತ್ರ ಮಾಹಿತಿ ಪುಟಗಳು

Naveen B M naveenbm at gmail.com
Sun Aug 27 01:02:42 UTC 2006


ದ್ವಂದ್ವ ಇಲ್ಲದ (ಸಾಮಾನ್ಯವಾಗಿ ಆ ಹೆಸರು ಬೇರೆ ವಿಷಯಗಳಲ್ಲಿ ಬರುವ ಸಾಧ್ಯತೆ ಕಮ್ಮಿ
ಇರುವಾಗ) ಚಲನಚಿತ್ರ ಪುಟಗಳನ್ನು ಅವುಗಳ ಹೆಸರಿನಲ್ಲೆ ವಿಕಿಪೀಡಿಯದಲ್ಲಿ ಉಳಿಸುವುದು
ಸರಿಯೆನಿಸುತ್ತದೆ. ಆಂಗ್ಲ ವಿಕಿಪೀಡಿಯದಲ್ಲೂ ಇದೇ ಪದ್ದತಿ ಅನುಸರಿಸುತಿದ್ದಾರೆ.

ಈ ಕೆಳಗಿನ ಲಿಂಕ್‌ನಲ್ಲಿ:

http://en.wikipedia.org/wiki/Category:English-language_films

ಕೇವಲ ದ್ವಂದ್ವ ಇರುವ ಲೇಖನಗಳಿಗೆ (ಉದಾ. 2001: A Space Odyssey
(film)<http://en.wikipedia.org/wiki/2001:_A_Space_Odyssey_%28film%29>,
Abraham Lincoln
(film)<http://en.wikipedia.org/wiki/Abraham_Lincoln_%28film%29>,
Alexander the Great (1956
film)<http://en.wikipedia.org/wiki/Alexander_the_Great_%281956_film%29>,
Brazil (film) <http://en.wikipedia.org/wiki/Brazil_%28film%29>, ಇತ್ಯಾದಿ),
filmಯೆಂದು ಲೇಖನದ ಹೆಸರಿಗೆ ಸೇರಿಸಲಾಗಿದೆ. ಉಳಿದ ಚಲನಚಿತ್ರ ಪುಟಗಳ(ಉದಾ. The
Animal<http://en.wikipedia.org/wiki/The_Animal>,
28 Weeks Later <http://en.wikipedia.org/wiki/28_Weeks_Later>, Big Trouble in
Little China <http://en.wikipedia.org/wiki/Big_Trouble_in_Little_China>, The
Brazilian Job <http://en.wikipedia.org/wiki/The_Brazilian_Job>, ಇತ್ಯಾದಿ)
ಹೆಸರನ್ನು ಮೂಲ ಚಿತ್ರದ ಹೆಸರಿನಲ್ಲೆ ಉಳಿಸಿಕೊಳ್ಲಲಾಗಿದೆ.

ಆಂಗ್ಲ ವಿಕಿಪೀಡಿಯದಲ್ಲಿ ಮಾಡುವುದೆಲ್ಲವು ಕನ್ನಡ ವಿಕಿಪೀಡಿಯದಲ್ಲಿ ಮಾಡಬೇಕೆಂದೇನಿಲ್ಲ,
ಆದರು ಸಹ ಉಳಿದ ವರ್ಗಗಳಲ್ಲಿ (ಮನೊಹರ ಅವರ ಉದಾಹರಣೆಗಳಂತೆ) ಕನ್ನಡ ವಿಕಿಪೀಡಿಯದಲ್ಲಿ
ಪಾಲಿಸುತ್ತಿರುವ ನಿಯಮಗಳನ್ನು ಚಲನಚಿತ್ರ ಪುಟಗಳಿಗೂ ಅನುಸರಸಬೇಕೆನ್ನುವುದು ನನ್ನ ಅಭಿಪ್ರಾಯ.

ಮಾಹಿತಿಯ ಪರಿಪೂರ್ಣತೆಯ ದೃಷ್ಟಿಯಿಂದ ನೋಡಿದರೆ, ಚಲನಚಿತ್ರ ಪುಟಗಳಲ್ಲಿ ಇನ್ನಷ್ಟು ಮಾಹಿತಿ
ಸೇರಿಸಬೇಕೆನಿಸುತ್ತದೆ. ಇದಾಗುವ ತನಕ ದ್ವಂದ್ವ ಹೆಸರು/ಸಂಧಿಗ್ದ ಇರಬಹುದಾದ
ಪುಟಗಳಲ್ಲಿಯಾದರು, ಇನ್ಫೋಬಾಕ್ಸನ ಜೊತೆಗೆ, "<ಚಲನಚಿತ್ರದ ಹೆಸರು> - ಇದು <ವರ್ಷ> ದಲ್ಲಿ
ತೆರೆಕಂಡ ಚಿತ್ರ" ಎಂದು ಮಾಹಿತಿ ಸೇರಿಸಿದರೆ, ಹೊಸದಾಗಿ ವಿಕಿಪೀಡಿಯ ಬಳಸುತ್ತಿರುವವರಿಗೆ
ಅನುಕೂಲವಾಗುತ್ತದೆ.

ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.

ಧನ್ಯವಾದಗಳು,
ನವೀನ್

On 8/27/06, K.N. Manohar <knmanohar at gmail.com> wrote:
>
>
>
> On 8/26/06, H P Nadig <hpnadig at gmail.com> wrote:
> >
> >  On Sat, 2006-08-26 at 12:39 -0500, K.N. Manohar wrote:
> >
> > ಇದರ ಬಗ್ಗೆ ಅರಳಿಕಟ್ಟೆಯಲ್ಲಿ ಚರ್ಚೆ ಪ್ರಾರಂಭವಾಗಿ, ಕೊನೆಗೆ ಈ mailing-listನಲ್ಲಿ
> > ಚರ್ಚೆಯಾಗಲಿ, ಇತರರ ಅಭಿಪ್ರಾಯವೂ ಧ್ವನಿಗೂಡಲಿ ಎಂದು ನಿರ್ಧಾರವಾಯಿತು. ಅದರ ಫಲವೇ, ಈ ಅಂಚೆ.
> >
> >
> > Actually, ಕಾರ್ಯನೀತಿ ಪುಟದಲ್ಲಿ (http://kn.wikipedia.org/wiki/WP:VP) ನಡೆದ
> > ಮಾತುಕತೆಯ ಕೊನೆಯ ಭಾಗ ಮಾತ್ರ ಬಹುಶಃ ನೀವು ಓದಿಕೊಂಡಿದ್ದೀರಿ.
> > ಮನೋಹರ್ ರವರು ಚಲನಚಿತ್ರಕ್ಕಾಗಿ ಹೊಸ namespace ಬಗ್ಗೆ ಪ್ರಸ್ತಾವನೆಗೆ ಮೇಯ್ಲಿಂಗ್
> > ಲಿಸ್ಟ್ ಮೊರೆ ಹೋಗಬಹುದು ಎಂದು ಮಾತುಕತೆ ನಡೆದಿತ್ತು.
> >
>
> namespace ಪ್ರಸ್ತಾವನೆ ಬರುವುದು, ಪ್ರತಿಯೊಂದು ಚಲನಚಿತ್ರ ಲೇಖನಕ್ಕೂ, ಅದು ಚಲನಚಿತ್ರದ
> ಬಗ್ಗೆಯ ಲೇಖನ ಎಂದು ಶೀರ್ಷಿಕೆಯಲ್ಲಿಯೇ ತಿಳಿಯಬೇಕು ಎಂದಾದಲ್ಲಿ ಮಾತ್ರ. ಇದನ್ನು
> ಕಾರ್ಯನೀತಿ ಪುಟದಲ್ಲಿ ನಡೆದ ಚರ್ಚೆಯಲ್ಲಿಯೂ ಬರೆದಿದ್ದೆ. ಆದುದರಿಂದ ಮೊದಲು: ಎಲ್ಲಾ
> ಚಲನಚಿತ್ರ ಲೇಖನಗಳ ಶೀರ್ಷಿಕೆಯಲ್ಲಿಯೇ 'ಚಲನಚಿತ್ರ' ಎಂದು ಬರೆಯುವ ವಿಚಾರವು
> ಇತ್ಯರ್ಥವಾಗಬೇಕಿದೆ. ಎಲ್ಲ ಪುಟಗಳಿಗೂ ಆ ರೀತಿ ಬದಲಾಯಿಸುವ ಅವಶ್ಯಕತೆಯಿಲ್ಲ ಎಂದಾದರೆ,
> ಪ್ರತ್ಯೇಕ namespace ಪ್ರಶ್ನೆಯೆ ಉದ್ಭವಿಸುವುದಿಲ್ಲ.
>
> ನೀವು ಹೇಳಿದ ಕ್ರಮದಂತೆ ಕೆಲವು ಮಾತ್ರ ಪುಟಗಳಿಗೆ ಶೀರ್ಷಿಕೆಯಲ್ಲಿ "ಚಲನಚಿತ್ರ" ಎಂದು
> > ಸೇರಿಸುವುದರ ಬದಲು ಎಲ್ಲ ಪುಟಗಳಿಗೆ ಚಲನಚಿತ್ರ ಹಾಕುವುದು ಏತಕ್ಕೆ ಒಳಿತು ಎಂಬುದರ ಬಗ್ಗೆ
> > ಆಗಲೇ ಕಾರ್ಯನೀತಿ ಚರ್ಚೆಯ ಪುಟದಲ್ಲಿ ತಿಳಿಸಿದ್ದೆ. ಅಲ್ಲಿ ನಾನು ಬರೆದದ್ದು ಹೀಗಿದೆ:
> >
> > "ಎಲ್ಲ ಚಲನಚಿತ್ರ ಕುರಿತ ಪುಟಗಳಿಗೆ *ಚಲನಚಿತ್ರ* ಎಂದು ಸೇರಿಸುವುದು ಒಳ್ಳೆಯದು.
> >  ೧) consistency ಇರುತ್ತದೆ.
> >
>
> ಇಲ್ಲಿ ಯಾವುದು consistency  ಎಂಬ ಪ್ರಶ್ನೆ  ಏಳುತ್ತದೆ.  ಎಲ್ಲಾ ಸಾಹಿತಿಗಳ ಪುಟದಲ್ಲಿ
> (ಸಾಹಿತಿ) ಎಂದು,  ಎಲ್ಲಾ ಕ್ರೀಡಾಪಟು  ಲೇಖನದ ಹೆಸರಿನಲ್ಲಿ (ಕ್ರೀಡಾಪಟು) ಎಂದು, ಎಲ್ಲಾ
> ರಾಜಕಾರಣಿಗಳ ಲೇಖನಗಳ ಹೆಸರಿನಲ್ಲಿ (ರಾಜಕಾರಣಿ) ಎಂದು, ಎಲ್ಲಾ ದೇಶಗಳ ಲೇಖನದ ಹೆಸರಿನಲ್ಲಿ
> (ದೇಶ) ಎಂದು, ಇತ್ಯಾದಿಯಾಗಿ ಸೇರಿಸುವ ಯೋಜನೆಯಿದ್ದಲ್ಲಿ, ಎಲ್ಲಾ ಚಲನಚಿತ್ರಗಳಿಗೂ
> (ಚಲನಚಿತ್ರ) ಎಂದು ಹಾಕಬಹುದು. ಆಗ consistency ಇರುತ್ತದೆ.
> ಬೇರೆ ವರ್ಗದ ಎಲ್ಲಾ ಲೇಖನಗಳಿಗೆ ಅನ್ವಯಿಸದೇ, ಚಲನಚಿತ್ರ ಲೇಖನಗಳಿಗೆ ಮಾತ್ರ ಇದನ್ನು
> ಅನ್ವಯಿಸಿದರೆ ಅದು inconsistency ಆಗುತ್ತದೆ.
>
> ಕೆಲವು ಲೇಖನಗಳಿಗೆ (ಚಲನಚಿತ್ರ) ಎಂದು ಹಾಕಿ ಮತ್ತೆ ಉಳಿದ ಲೇಖನಗಳಿಗೆ ಹಾಕದಿದ್ದರೆ ಅದು
> inconsistency ಆಗುತ್ತದೆ ಎನ್ನಲಾಗುವುದಿಲ್ಲ. ಏಕೆಂದರೆ ಎಲ್ಲಿ ಅವಶ್ಯಕತೆಯಿದೆಯೋ ಅಲ್ಲಿ
> ಮಾತ್ರ, ದ್ವಂದ್ವ ನಿವಾರಣೆಯ ಏಕೈಕ ಉದ್ದೇಶದಿಂದ ಹಾಕಲಾಗಿರುತ್ತದೆ. ಈಗಾಗಲೇ ಕೊಟ್ಟಿರುವ
> ಉದಾಹರಣೆಗಳಂತೆ, ಕಿತ್ತೂರು ಚೆನ್ನಮ್ಮ, ಉಪೇಂದ್ರ , ರಣಧೀರ ಕಂಠೀರವ ಇತ್ಯಾದಿ.
> ಈ ನೀತಿಯು ಇತರ ವರ್ಗದಲ್ಲಿಯೂ ಕಾಣಬಹುದು. ಉದಾಹರಣೆಗೆ ಚದುರಂಗ ಸಾಹಿತಿ, ಚದುರಂಗ ಆಟ;
> ಬಾದಾಮಿ ಪದಾರ್ಥ ಮತ್ತು ಬಾದಾಮಿ ಊರು; ಇತ್ಯಾದಿ.
> ಚದುರಂಗ - ಚೆಸ್ - ಲೇಖನಕ್ಕೆ ಚದುರಂಗ (ಆಟ) ಎಂದು ಹೆಸರಿಸಿದರೆ ಉಳಿದ ಲೇಖನಗಳಿಗೂ (ಆಟ)
> ಎಂದು ಸೇರಿಸುತ್ತೇವೆಯೆ? ಖಂಡಿತ ಇಲ್ಲ. ಕಾರಣವೇನೆಂದರೆ, ಅಲ್ಲಿ (ಆಟ) ಎಂದು ಸೇರಿಸುವ
> ಏಕೈಕ  ಕಾರಣ ಅದು ಸಾಹಿತಿ ಚದುರಂಗ,  ಚಲನಚಿತ್ರ ಚದುರಂಗ ಲೇಖನಗಳೊಡನೆ ಇರುವ ದ್ವಂದ್ವ
> ನಿವಾರಣೆಯಾಗಲಿ ಎಂಬುದಕ್ಕೆ ಮಾತ್ರ.
>
>
> ೨) ವಿಕಿಪೀಡಿಯವನ್ನು ವಿಹರಿಸುತ್ತಿರುವ ಓದುಗರಿಗೆ "*ಹೊಸ ಇತಿಹಾಸ"*, "*ವಾತ್ಸಲ್ಯ ಪಥ"*,
> > "*ಅಪರಾಧಿ ನಾನಲ್ಲ"*, "*ಅವಳೇ ನನ್ನ ಹೆಂಡತಿ"* ಎಂದೆಲ್ಲ ಹೆಸರಿನ ಪುಟಗಳು ಎದುರಾದರೆ
> > ಕಕ್ಕಾಬಿಕ್ಕಿಯಾಗುವಂತೆ ಮಾಡಿಬಿಡುತ್ತದೆ. ವಿಕಿಪೀಡಿಯ ಬಗ್ಗೆ ಹೆಚ್ಚೇನೂ ಅರಿಯದ ಹೊಸ
> > ಸದಸ್ಯರಿಗಂತೂ ಇದು ತಪ್ಪು ಸಂಕೇತ ರವಾನಿಸುತ್ತದೆ.
> > ಜೊತೆಗೆ ಸಾಕಷ್ಟು ಚಲನಚಿತ್ರ ಪುಟಗಳಲ್ಲಿ ಶೀರ್ಷಿಕೆಯ ಕೆಳಗೆ "ಇದು ಚಲನಚಿತ್ರ" ಎಂಬ
> > ಒಂದು ವಾಕ್ಯ ಕೂಡ ಇಲ್ಲ. ಓದುಗರು ಇನ್ಫೋಬಾಕ್ಸ್ ಓದಿಯೇ ಮೇಲಿನಂತಹ ಶೀರ್ಷಿಕೆಗಳು ತಂದೊಡ್ಡುವ
> > ಶಾಕ್ ಶಮನ ಮಾಡಿಕೊಳ್ಳಬೇಕು. ಅದೇ ಚಲನಚಿತ್ರ ಎಂಬ ಹೆಸರಿನೊಂದಿಗೆ ಸೇರಿಸಿದರೆ, ಚಲನಚಿತ್ರಗಳ
> > ಹೆಸರಿನ contextನಲ್ಲಿ ಸ್ವೀಕೃತವಾಗಿರುವ ಮೇಲಿನಂತಹ ಶೀರ್ಷಿಕೆಗಳು ಯಾವುದೇ ಆಭಾಸವನ್ನು
> > ಸೃಷ್ಟಿಸುವುದಿಲ್ಲ."
> >
> > ಹಲವು ಚಲನಚಿತ್ರ ಕುರಿತ ಪುಟಗಳ ಶೀರ್ಷಿಕೆಗಳು ಹೀಗಿವೆ:
> > "ಮನೇಲಿ ರಾಮಣ್ಣ ಬೀದೀಲಿ ಕಾಮಣ್ಣ"
> > "ನನ್ನ ಪ್ರಾಯಶ್ಚಿತ್ತ "
> > "ಮುತ್ತು ಒಂದು ಮುತ್ತು"
> > ಇತ್ಯಾದಿ...
> >
> > ಮಾಹಿತಿ ಅರಸಿ ಬಂದ ಓದುಗರಿಗೆ ದಿಢೀರನೆ ಶಾಕ್ ಕೊಡುವಂತ ಪುಟಗಳಿವು.
> >
>
> ಓದುಗರಿಗೆ ಕಕ್ಕಾಬಿಕ್ಕಿಯಾಗಿಸುವುದು, ಅಥವಾ ಶಾಕ್ ಕೊಡುವಂತ ಪುಟಗಳು  ಇವು  ಎಂಬುದು
> ಚರ್ಚಾಸ್ಪದ.  ನನ್ನ ಅಭಿಪ್ರಾಯದಲ್ಲಿ  ಓದುಗನಿಗೆ ಯಾವುದೇ ಶಾಕ್  ಈ ಲೇಖನಗಳು ಕೊಡುವುದಿಲ್ಲ.
> ಇತರ ಸಂಪಾದಕರು, ಸದಸ್ಯರುಗಳು ಈ ಪುಟಗಳನ್ನು ನೋಡಿ ತೀರ್ಮಾನಿಸಲಿ.
>
>
> ಅಂತಹ ಪುಟಗಳಲ್ಲಿ "ಇದೊಂದು ಚಲನಚಿತ್ರ" ವೆಂಬ ಮಾಹಿತಿ ಕೂಡ ೯೦% ಪುಟಗಳಲ್ಲಿ ಈಗಿನಂತೆ
> > ಇಲ್ಲ. ಹೀಗಾಗಿ ಶೀರ್ಷಿಕೆಯಲ್ಲಿಯೇ ಇದು 'ಸಿನಿಮಾ' ಎಂದು ತಿಳಿಸಿಬಿಡುವುದು ವಿಕಿಪೀಡಿಯದ
> > ಗುಣಮಟ್ಟವನ್ನು ಸಾಧಿಸುವಲ್ಲಿ ಒಂದು ಹೆಜ್ಜೆ ಮುಂದಿಟ್ಟಂತೆ.
> >
>
> ಪರಿಹಾರದ ದೃಷ್ಟಿಯಿಂದ, ಆಗಬೇಕಿರುವ ಕೆಲಸಗಳ ದೃಷ್ಟಿಯಿಂದ:
> ಪ್ರತಿಯೊಂದು ಚಲನಚಿತ್ರ ಲೇಖನದಲ್ಲಿಯೂ ಅದು ಒಂದು ಚಲನಚಿತ್ರದ ಬಗ್ಗೆ ಇರುವ ಪುಟ ಎಂದು
> ಓದುಗನಿಗೆ ತಿಳಿಯುವಂತೆ ಮಾಡಬೇಕಿದೆಯೆ? ಸರಿ, ಆ ನಿಟ್ಟಿನಲ್ಲಿ ಕೆಲಸ ಮಾಡೋಣ.
> ಶೀರ್ಷಿಕೆಯಲ್ಲಿ ಸಿನಿಮಾ ಎಂದು ಅಥವ ಚಲನಚಿತ್ರವೆಂದು ಸೇರಿಸುವುದು ಪರಿಹಾರವಲ್ಲ. ಈಗಾಗಲೇ
> ತಿಳಿಸಿದಂತೆ ಹಾಗೆ ಸೇರಿಸುವ ಸನ್ನಿವೇಶಗಳು, ಅಗತ್ಯಗಳೇ ಬೇರೆ. ಆ ಅಗತ್ಯಗಳು ಚಲನಚಿತ್ರಗಳಿಗೆ
> ಮಾತ್ರ ಸೀಮಿತವಲ್ಲ. ಎಲ್ಲಾ ರೀತಿಯ ಲೇಖನಗಳಿಗೆ ಅನ್ವಯಿಸುತ್ತದೆ.
> ಓದುಗನು ಲೇಖನವನ್ನು ನೋಡಿದಾಗ ಆ ಲೇಖನವು ಒಂದು ಚಲನಚಿತ್ರದ ಬಗ್ಗೆಯೆ ಎಂದೂ, ಜೊತೆಗೆ ಆ
> ಚಿತ್ರವು ಯಾವ ಭಾಷೆಯದ್ದೆಂದೂ, ಅದು ಯಾವ ವರ್ಷ ಬಿಡುಗಡೆಯಾಯಿತೆಂದೂ, ಪ್ರತಿಯೊಂದು
> ಲೇಖನದಲ್ಲಿ ಸುಲಭವಾಗಿ ಕಾಣುವಂತೆ ಹಾಕಿದರೆ ಸಾಕೆ?
>
> ಉದಾಹರಣೆ: '' ವಾತ್ಸಲ್ಯ ಪಥ'' - ವರ್ಷ ೧೯೮೦ರಲ್ಲಿ ಬಿಡುಗಡೆಯಾದ ಕನ್ನಡ
> ಚಲನಚಿತ್ರಗಳಲ್ಲೊಂದು.
>
> ಈ ರೀತಿ ಬರೆಯುವುದರಿಂದ ಓದುಗನಿಗೆ, ತಾನು ಯಾವುದರ ಬಗ್ಗೆ ಲೇಖನ ನೋಡುತ್ತಿದ್ದೇನೆ ಎಂದು
> ಸ್ಪಷ್ಟವಾಗುತ್ತಾದಲ್ಲಿ, ಈ ಕೆಲಸವನ್ನು ಖಂಡಿತಾ ಮಾಡೋಣ.
>
> ದಯವಿಟ್ಟು ತಿಳಿಸಿ.
>
> - ಮನ
>
> _______________________________________________
> Wikikn-l mailing list
> Wikikn-l at Wikipedia.org
> http://mail.wikipedia.org/mailman/listinfo/wikikn-l
>
>
>


-- 
Naveen
-------------- next part --------------
An HTML attachment was scrubbed...
URL: http://lists.wikimedia.org/pipermail/wikikn-l/attachments/20060827/812916f0/attachment.htm 


More information about the Wikikn-l mailing list