[Wikikn-l (kannada wikipedia)] ಕನ್ನಡ ವಿಕಿಪೀಡಿಯದಲ್ಲಿ ಚಲನಚಿತ್ರ ಮಾಹಿತಿ ಪುಟಗಳು

H P Nadig hpnadig at gmail.com
Sun Aug 27 03:57:03 UTC 2006


On Sat, 2006-08-26 at 16:50 -0500, K.N. Manohar wrote:


> namespace ಪ್ರಸ್ತಾವನೆ ಬರುವುದು, ಪ್ರತಿಯೊಂದು ಚಲನಚಿತ್ರ ಲೇಖನಕ್ಕೂ, ಅದು
> ಚಲನಚಿತ್ರದ ಬಗ್ಗೆಯ ಲೇಖನ ಎಂದು ಶೀರ್ಷಿಕೆಯಲ್ಲಿಯೇ ತಿಳಿಯಬೇಕು ಎಂದಾದಲ್ಲಿ ಮಾತ್ರ.
> ಇದನ್ನು ಕಾರ್ಯನೀತಿ ಪುಟದಲ್ಲಿ ನಡೆದ ಚರ್ಚೆಯಲ್ಲಿಯೂ ಬರೆದಿದ್ದೆ.

ನಿಮ್ಮ ಪ್ರಕಾರ ಅದು ಯಾವಾಗ ಬರುತ್ತದೋ ನನಗೆ ತಿಳಿದಿಲ್ಲ ಸ್ವಾಮಿ. ನೀವು "ಚಲನಚಿತ್ರ"
ಪುಟಗಳಿಗೆ ಹೊಸ namespace ಬೇಕು ಎಂದು ಬರೆದದ್ದಕ್ಕೆ ಉತ್ತರವಾಗಿ "ಮೇಯ್ಲಿಂಗ್
ಲಿಸ್ಟಿನಲ್ಲಿ ಚರ್ಚಿಸೋಣ" ಎಂದೆ. ಕಾರ್ಯನೀತಿಯೊಂದನ್ನು ಇಲ್ಲಿ ಚರ್ಚಿಸೋಣವೆಂದು
ಹೇಳಲಿಲ್ಲ. 

ನಾವೀಗ ಚರ್ಚಿಸುತ್ತಿರುವ ಶೀರ್ಷಿಕೆಯೊಂದಿಗೆ "ಚಲನಚಿತ್ರ" ಸೇರಿಸಬೇಕೋ ಬೇಡವೋ ಎಂಬುವ
ವಿಷಯ ನ್ಯಾಯವಾಗಿ ವಿಕಿಪೀಡಿಯದ ಕಾರ್ಯನೀತಿ ಪುಟದಲ್ಲಿಯೇ ನಡೆಯಬೇಕು. ನಡೆದ ಚರ್ಚೆ ಒಂದೇ
ಕಡೆ ಆರ್ಕೈವಿನಲ್ಲಿ ಲಭ್ಯವಿದ್ದಲ್ಲಿ ಒಳಿತು. 

>  ಆದುದರಿಂದ ಮೊದಲು: ಎಲ್ಲಾ ಚಲನಚಿತ್ರ ಲೇಖನಗಳ ಶೀರ್ಷಿಕೆಯಲ್ಲಿಯೇ 'ಚಲನಚಿತ್ರ' ಎಂದು
> ಬರೆಯುವ ವಿಚಾರವು ಇತ್ಯರ್ಥವಾಗಬೇಕಿದೆ. ಎಲ್ಲ ಪುಟಗಳಿಗೂ ಆ ರೀತಿ ಬದಲಾಯಿಸುವ
> ಅವಶ್ಯಕತೆಯಿಲ್ಲ ಎಂದಾದರೆ, ಪ್ರತ್ಯೇಕ namespace ಪ್ರಶ್ನೆಯೆ ಉದ್ಭವಿಸುವುದಿಲ್ಲ. 

ಇದನ್ನು "ಇತ್ಯರ್ಥ"  ಮಾಡಬೇಕಾಗಿರುವುದು ಕಾರ್ಯನೀತಿ ಪುಟದಲ್ಲಿ. ಮುಂದಿನ ಉತ್ತರ ನಾನು
ಮೇಯ್ಲಿಂಗ್ ಲಿಸ್ಟಿನಲ್ಲಿ ನೀಡುವುದಿಲ್ಲ. ಈ ಚರ್ಚೆಯನ್ನು ಅಲ್ಲಿಗೇ ವರ್ಗಾಯಿಸಿ. 

> ಇಲ್ಲಿ ಯಾವುದು consistency  ಎಂಬ ಪ್ರಶ್ನೆ  ಏಳುತ್ತದೆ.  ಎಲ್ಲಾ ಸಾಹಿತಿಗಳ
> ಪುಟದಲ್ಲಿ  (ಸಾಹಿತಿ) ಎಂದು,  ಎಲ್ಲಾ ಕ್ರೀಡಾಪಟು  ಲೇಖನದ ಹೆಸರಿನಲ್ಲಿ
> (ಕ್ರೀಡಾಪಟು) ಎಂದು, ಎಲ್ಲಾ ರಾಜಕಾರಣಿಗಳ ಲೇಖನಗಳ ಹೆಸರಿನಲ್ಲಿ (ರಾಜಕಾರಣಿ)

ಈಗಾಗಲೇ ಹಲವು ಚಲನಚಿತ್ರ ಪುಟಗಳಿಗೆ ಬೇರೊಂದು ವಿಷಯದ ಹೆಸರಿರುರುವುದೆಂದು (ಉದಾ:
"ಚದುರಂಗ") ನಾವು *ಈಗಾಗಲೇ* ಶೀರ್ಷಿಕೆಯೊಂದಿಗೆ "(ಚಲನಚಿತ್ರ)" ಎಂಬುದನ್ನು
ಸೇರಿಸುತ್ತಿಲ್ಲವೆ? ಆದ್ದರಿಂದ ಶೀರ್ಷಿಕೆಯಲ್ಲಿ "(ಚಲನಚಿತ್ರ)" ಎಂಬುದನ್ನು ಸೇರಿಸುವ
ಮಟ್ಟಿಗೆ ನಾವುಗಳು ಒಪ್ಪಿಕೊಂಡಾಗಿದೆ. 
ಈಗ ಅದನ್ನು ಎಲ್ಲ ಚಲನಚಿತ್ರ ಪುಟಗಳಿಗೆ ಸೇರಿಸಿದಲ್ಲಿ 'ಯಾವುದಕ್ಕೆ ಸೇರಿಸಬೇಕು
ಯಾವುದಕ್ಕೆ ಸೇರಿಸಬಾರದು' ಎಂಬುದರ ಬಗ್ಗೆ ಸದಸ್ಯರಿಗೆ
ತಲೆಕೆಡಿಸಿಕೊಳ್ಳಬೇಕಾಗುವುದಿಲ್ಲ. consistencyಯೂ ಹೆಚ್ಚುತ್ತದೆ. 

> ಎಂದು, ಎಲ್ಲಾ ದೇಶಗಳ ಲೇಖನದ ಹೆಸರಿನಲ್ಲಿ (ದೇಶ) ಎಂದು, ಇತ್ಯಾದಿಯಾಗಿ ಸೇರಿಸುವ
> ಯೋಜನೆಯಿದ್ದಲ್ಲಿ, ಎಲ್ಲಾ ಚಲನಚಿತ್ರಗಳಿಗೂ (ಚಲನಚಿತ್ರ) ಎಂದು ಹಾಕಬಹುದು. ಆಗ
> consistency ಇರುತ್ತದೆ. 

ನೀವು ಬಹುಶಃ ಒಂದು ಅಂಶ ಮರೆಯುತ್ತಿದ್ದೀರಿ. ಕೇವಲ ೩೦೦೦+ ಲೇಖನಗಳಿರುವ ಕನ್ನಡ
ವಿಕಿಪೀಡಿಯದಲ್ಲಿ ೧೫೦೦ಕ್ಕೂ ಹೆಚ್ಚು "ಚಲನಚಿತ್ರ" ಕುರಿತ stubಗಳೇ ಇವೆ! (ಚುಟುಕು
ಲೇಖನಗಳು). 
ಈ ಚುಟುಕು ಲೇಖನಗಳಲ್ಲಿ ಬರಿಯ ಶೀರ್ಷಿಕೆಯೊಂದನ್ನು ಸೇರಿಸಿ ಅದರೊಂದಿಗೆ infobox
ಒಂದನ್ನು ಸೇರಿಸಿ ಬಿಟ್ಟುಬಿಡಲಾಗಿದೆ. ಕೇವಲ ೩೦೦೦ ಲೇಖನಗಳಿರುವ ವಿಕಿಯೊಂದರಲ್ಲಿ
ಇಷ್ಟೊಂದು ಚಲನಚಿತ್ರ stubಗಳು ಈ ರೀತಿ ಸೇರ್ಪಡೆಯಾಗುತ್ತಿರುವುದು ಬಹುಶಃ ಕನ್ನಡ
ವಿಕಿಯೊಂದರಲ್ಲೆ. ಅಂತಹ ಪುಟಗಳಲ್ಲಿ "ಇದೊಂದು ಚಲನಚಿತ್ರ" ಎಂಬ ಒಂದು ವಾಕ್ಯ ಕೂಡ
ಇಲ್ಲ! 

random ಲೇಖನ ಲಿಂಕ್ ಕ್ಲಿಕ್ಕಿಸಿದರೆ ಐದರಲ್ಲಿ ನಾಲ್ಕು ಬಾರಿ ಇದೇ ಚಲನಚಿತ್ರದ
stubಗಳು ಓದಲು ಸಿಗುತ್ತವೆ. ಚಲನಚಿತ್ರಗಳ ಹೆಸರುಗಳು ಸಂಸ್ಕೃತಿಯ ಹಲವು ಕೋನಗಳಿಂದ
ಬಂದಿರುತ್ತವೆ.  ಓದುಗರಿಗೆ ದಿಢೀರನೆ 

"ಮನೇಲಿ ರಾಮಣ್ಣ ಬೀದೀಲಿ ಕಾಮಣ್ಣ"
"ಅಳಿಯ ಮನೆ ತೊಳಿಯ"
"ಎಕ್ಸ್ ಕ್ಯೂಸ್ ಮಿ"

ಎಂದೆಲ್ಲ ಪುಟಗಳು ಎದುರಾದರೆ ವಿಕಿಪೀಡಿಯದಲ್ಲಿ ಓದುಗರ ಅಚ್ಚರಿ ನೀವೇ ಊಹಿಸಿಕೊಳ್ಳಿ.
ವಿಕಿಪೀಡಿಯ ಮಾಹಿತಿಯ ಭಂಡಾರವಾಗಬೇಕಾದ ಪ್ರಾಜೆಕ್ಟು. ಇಲ್ಲಿ ವಿಶ್ವಕೋಶವೊಂದನ್ನು ಓದಿದ
ಅಥವ ಅದರ ಹತ್ತಿರದ ಅನುಭವ ಓದುಗರಿಗಾಗಬೇಕು. 

> 
-- 
http://hpnadig.net/blog/

"Creativity requires the courage to let go of certainties." ~ Erich
Fromm




More information about the Wikikn-l mailing list