[Wikikn-l (kannada wikipedia)] Interwiki ಸಂಪರ್ಕಗಳ ಅವಶ್ಯಕತೆ

H P Nadig hpnadig at gmail.com
Fri Aug 11 14:32:41 UTC 2006


ಸ್ನೇಹಿತರೆ, 

   ಎಲ್ಲರಿಗೂ ನಮಸ್ಕಾರ. ಇತ್ತೀಚೆಗೆ ವಿಕಿಪೀಡಿಯ ಸಾಕಷ್ಟು ಕ್ಷಿಪ್ರ ಗತಿಯಲ್ಲಿ
ಬೆಳೆಯುತ್ತಿದೆ. ಆದರೆ ಈ ಬೆಳವಣಿಗೆ ಹೆಚ್ಚಿನ ಜನರಿಗೆ ತಿಳಿಯತಲುಪಬೇಕೆಂಬುದಿದ್ದಲ್ಲಿ
ನಾವುಗಳು Interwiki ಸಂಪರ್ಕಗಳನ್ನು ಹೆಚ್ಚಾಗಿ ಸಂಪಾದನೆ ಮಾಡುವಾಗ ಬಳಸುವ ಅವಶ್ಯಕತೆ
ಇದೆ. ಈ Interwiki links ಬಗ್ಗೆ ಎಲ್ಲರ ಗಮನ ಸೆಳೆಯಲು ಈ ಪತ್ರ. 

ಇಂಟರ್ ವಿಕಿ ಸಂಪರ್ಕಗಳನ್ನು ಬಳಸಿ ಉಳಿದ ಭಾಷೆಗಳ ವಿಕಿಪೀಡಿಯಗಳ ಪುಟಗಳಲ್ಲಿ ಆಯಾ
ಶೀರ್ಷಿಕೆಗೆ ಕನ್ನಡ ಪುಟವೂ ಇದ್ದರೆ, ಅಲ್ಲೊಂದು ಕನ್ನಡ ಪುಟಕ್ಕೆ ಸಂಪರ್ಕ
ಸೇರಿಸಬಹುದು. 
ಅಥವ, 
ಕನ್ನಡ ವಿಕಿಯಲ್ಲೆ ಬರೇ ಆಂಗ್ಲ ಭಾಷೆಯಲ್ಲಿರುವ ಪುಟಕ್ಕೆ ಇಂಟರ್ ವಿಕಿ ಸೇರಿಸಿದರೂ
ಆಯಿತು. ವಾರದಾದ್ಯಂತ ಹಲವು Botಗಳು ಕನ್ನಡ ವಿಕಿಪೀಡಿಯದ ಮೇಲೆ
ಕಾರ್ಯನಿರ್ವಹಿಸುತ್ತಿರುತ್ತವಾದ್ದರಿಂದ ಆಂಗ್ಲ ಭಾಷೆಯ ವಿಕಿಯಲ್ಲಿರುವ ಉಳಿದ ಭಾಷೆಯ
Interwiki ಸಂಪರ್ಕಗಳನ್ನು ತಂತಾನಾಗಿಯೇ ಸೇರಿಸಿಬಿಡುತ್ತವೆ. 

Interwiki link ಒಂದನ್ನು ಸೇರಿಸುವುದಕ್ಕೊಂದು ಉದಾಹರಣೆ:

[[en:Kannada]]  - ಎಂಬ  "ಕನ್ನಡ" ಎಂಬ ಶೀರ್ಷಿಕೆಯ ಪುಟದಲ್ಲಿ ಸೇರಿಸಿದರೆ  ಆ ಪುಟದ
ಎಡ ಭಾಗದ ಮೆನ್ಯುನಲ್ಲಿ  "English" ಎಂಬ ಸಂಪರ್ಕ ಮೂಡುತ್ತದೆ. 

ಹೀಗೆಯೇ ಆಂಗ್ಲ ಪುಟದ "Kannada" ಶೀರ್ಷಿಕೆಯ ಪುಟದಲ್ಲಿ:
[[kn:ಕನ್ನಡ]] ಎಂದು ಸೇರಿಸಿದರೆ ಅಲ್ಲಿ ಮೇಲಿನಂತೆ ಆದರೆ ಕನ್ನಡ ವಿಕಿಪೀಡಿಯದ ಪುಟಕ್ಕೆ
ಸಂಪರ್ಕ ಸೇರ್ಪಡೆಯಾಗುತ್ತದೆ. 

ಒಟ್ಟಾರೆ, ಆಂಗ್ಲ ವಿಕಿಯಲ್ಲಿರುವ ಪುಟಗಳಲ್ಲಿ ಆಯಾ ಕನ್ನಡ ಪುಟಗಳಿಗೆ ಒಂದೊಂದು ಸಂಪರ್ಕ
ಕಲ್ಪಿಸಿಬಿಟ್ಟರೆ ಸಾಕು, ಇನ್ನುಳಿದ ಭಾಷೆಗಳ ಜವಾಬ್ದಾರಿ Botಗಳು ವಹಿಸಿಕೊಂಡು ಕೆಲಸ
ಮಾಡುತ್ತವೆ. ಆದ್ದರಿಂದ ಇಂದಿನಿಂದಲೇ ಶುರು ಹಚ್ಚಿಕೊಳ್ಳೋಣ. ಏನಂತೀರಿ? ;-)

ಧನ್ಯವಾದಗಳು,

  - ಹರಿ ಪ್ರಸಾದ್ ನಾಡಿಗ್ 




More information about the Wikikn-l mailing list