On Sat, 2006-08-26 at 12:39 -0500, K.N. Manohar wrote:
ಇದರ ಬಗ್ಗೆ ಅರಳಿಕಟ್ಟೆಯಲ್ಲಿ ಚರ್ಚೆ ಪ್ರಾರಂಭವಾಗಿ, ಕೊನೆಗೆ ಈ mailing-listನಲ್ಲಿ ಚರ್ಚೆಯಾಗಲಿ, ಇತರರ ಅಭಿಪ್ರಾಯವೂ ಧ್ವನಿಗೂಡಲಿ ಎಂದು ನಿರ್ಧಾರವಾಯಿತು. ಅದರ ಫಲವೇ, ಈ ಅಂಚೆ.

Actually, ಕಾರ್ಯನೀತಿ ಪುಟದಲ್ಲಿ (http://kn.wikipedia.org/wiki/WP:VP) ನಡೆದ ಮಾತುಕತೆಯ ಕೊನೆಯ ಭಾಗ ಮಾತ್ರ ಬಹುಶಃ ನೀವು ಓದಿಕೊಂಡಿದ್ದೀರಿ.
ಮನೋಹರ್ ರವರು ಚಲನಚಿತ್ರಕ್ಕಾಗಿ ಹೊಸ namespace ಬಗ್ಗೆ ಪ್ರಸ್ತಾವನೆಗೆ ಮೇಯ್ಲಿಂಗ್ ಲಿಸ್ಟ್ ಮೊರೆ ಹೋಗಬಹುದು ಎಂದು ಮಾತುಕತೆ ನಡೆದಿತ್ತು.

ನೀವು ಹೇಳಿದ ಕ್ರಮದಂತೆ ಕೆಲವು ಮಾತ್ರ ಪುಟಗಳಿಗೆ ಶೀರ್ಷಿಕೆಯಲ್ಲಿ "ಚಲನಚಿತ್ರ" ಎಂದು ಸೇರಿಸುವುದರ ಬದಲು ಎಲ್ಲ ಪುಟಗಳಿಗೆ ಚಲನಚಿತ್ರ ಹಾಕುವುದು ಏತಕ್ಕೆ ಒಳಿತು ಎಂಬುದರ ಬಗ್ಗೆ ಆಗಲೇ ಕಾರ್ಯನೀತಿ ಚರ್ಚೆಯ ಪುಟದಲ್ಲಿ ತಿಳಿಸಿದ್ದೆ. ಅಲ್ಲಿ ನಾನು ಬರೆದದ್ದು ಹೀಗಿದೆ:

"ಎಲ್ಲ ಚಲನಚಿತ್ರ ಕುರಿತ ಪುಟಗಳಿಗೆ ಚಲನಚಿತ್ರ ಎಂದು ಸೇರಿಸುವುದು ಒಳ್ಳೆಯದು.
೧) consistency ಇರುತ್ತದೆ.
೨) ವಿಕಿಪೀಡಿಯವನ್ನು ವಿಹರಿಸುತ್ತಿರುವ ಓದುಗರಿಗೆ "ಹೊಸ ಇತಿಹಾಸ", "ವಾತ್ಸಲ್ಯ ಪಥ", "ಅಪರಾಧಿ ನಾನಲ್ಲ", "ಅವಳೇ ನನ್ನ ಹೆಂಡತಿ" ಎಂದೆಲ್ಲ ಹೆಸರಿನ ಪುಟಗಳು ಎದುರಾದರೆ ಕಕ್ಕಾಬಿಕ್ಕಿಯಾಗುವಂತೆ ಮಾಡಿಬಿಡುತ್ತದೆ. ವಿಕಿಪೀಡಿಯ ಬಗ್ಗೆ ಹೆಚ್ಚೇನೂ ಅರಿಯದ ಹೊಸ ಸದಸ್ಯರಿಗಂತೂ ಇದು ತಪ್ಪು ಸಂಕೇತ ರವಾನಿಸುತ್ತದೆ.
ಜೊತೆಗೆ ಸಾಕಷ್ಟು ಚಲನಚಿತ್ರ ಪುಟಗಳಲ್ಲಿ ಶೀರ್ಷಿಕೆಯ ಕೆಳಗೆ "ಇದು ಚಲನಚಿತ್ರ" ಎಂಬ ಒಂದು ವಾಕ್ಯ ಕೂಡ ಇಲ್ಲ. ಓದುಗರು ಇನ್ಫೋಬಾಕ್ಸ್ ಓದಿಯೇ ಮೇಲಿನಂತಹ ಶೀರ್ಷಿಕೆಗಳು ತಂದೊಡ್ಡುವ ಶಾಕ್ ಶಮನ ಮಾಡಿಕೊಳ್ಳಬೇಕು. ಅದೇ ಚಲನಚಿತ್ರ ಎಂಬ ಹೆಸರಿನೊಂದಿಗೆ ಸೇರಿಸಿದರೆ, ಚಲನಚಿತ್ರಗಳ ಹೆಸರಿನ contextನಲ್ಲಿ ಸ್ವೀಕೃತವಾಗಿರುವ ಮೇಲಿನಂತಹ ಶೀರ್ಷಿಕೆಗಳು ಯಾವುದೇ ಆಭಾಸವನ್ನು ಸೃಷ್ಟಿಸುವುದಿಲ್ಲ."

ಹಲವು ಚಲನಚಿತ್ರ ಕುರಿತ ಪುಟಗಳ ಶೀರ್ಷಿಕೆಗಳು ಹೀಗಿವೆ:
"ಮನೇಲಿ ರಾಮಣ್ಣ ಬೀದೀಲಿ ಕಾಮಣ್ಣ"
"ನನ್ನ ಪ್ರಾಯಶ್ಚಿತ್ತ "
"ಮುತ್ತು ಒಂದು ಮುತ್ತು"
ಇತ್ಯಾದಿ...

ಮಾಹಿತಿ ಅರಸಿ ಬಂದ ಓದುಗರಿಗೆ ದಿಢೀರನೆ ಶಾಕ್ ಕೊಡುವಂತ ಪುಟಗಳಿವು. ಅಂತಹ ಪುಟಗಳಲ್ಲಿ "ಇದೊಂದು ಚಲನಚಿತ್ರ" ವೆಂಬ ಮಾಹಿತಿ ಕೂಡ ೯೦% ಪುಟಗಳಲ್ಲಿ ಈಗಿನಂತೆ ಇಲ್ಲ. ಹೀಗಾಗಿ ಶೀರ್ಷಿಕೆಯಲ್ಲಿಯೇ ಇದು 'ಸಿನಿಮಾ' ಎಂದು ತಿಳಿಸಿಬಿಡುವುದು ವಿಕಿಪೀಡಿಯದ ಗುಣಮಟ್ಟವನ್ನು ಸಾಧಿಸುವಲ್ಲಿ ಒಂದು ಹೆಜ್ಜೆ ಮುಂದಿಟ್ಟಂತೆ.

ಸೂ: ಇಲ್ಲಿ ವೈಯಕ್ತಿಕ ಹಿತಸಾಧನೆಯಾಗಲಿ, ವೈಯಕ್ತಿಕ ಸಮರವಾಗಲಿ ಬೆರೆಸುವುದು ಬೇಡ. ವಿಕಿಪೀಡಿಯದ ಒಳಿತಿಗೆ ಕೂಡಿ ನಿರ್ಧಾರಕ್ಕೆ ಬರೋಣ.

ಧನ್ಯವಾದಗಳು,

- h.p.

-- 
http://hpnadig.net/blog/

"Creativity requires the courage to let go of certainties." ~ Erich
Fromm