[Wikikn-l (kannada wikipedia)] ಕನ್ನಡ ವಿಕಿಪೀಡಿಯದಲ್ಲಿ ಚಲನಚಿತ್ರ ಮಾಹಿತಿ ಪುಟಗಳು

K.N. Manohar knmanohar at gmail.com
Sun Aug 27 05:07:13 UTC 2006


ಕ್ಷಮಿಸಿ. ಹಿಂದಿನ ಮೈಲ್ ನಲ್ಲಿ ಕಳಿಸಿದ್ದ ಲಿಂಕ್ ತಪ್ಪಾಗಿತ್ತು. ಈಗ ಸರಿಯಾದ ಲಿಂಕ್
ಕಳಿಸುತ್ತಿದ್ದೇನೆ.
----

ಸರಿ. mailing-listನಲ್ಲಿ ನಡೆದಿರುವ ಈ ಚರ್ಚೆಯಲ್ಲಿ ನಾನು ಮಂಡಿಸಿದ ಅಭಿಪ್ರಾಯಗಳನ್ನು
ವಿಕಿಪೀಡಿಯ:ಅರಳಿಕಟ್ಟೆ ಪುಟಕ್ಕೆ ಸೇರಿಸಿದ್ದೇನೆ.

http://kn.wikipedia.org/wiki/<http://kn.wikipedia.org/wiki/%20%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%85%E0%B2%B0%E0%B2%B3%E0%B2%BF%20%E0%B2%95%E0%B2%9F%E0%B3%8D%E0%B2%9F%E0%B3%86>ವಿಕಿಪೀಡಿಯ:ಅರಳಿ
ಕಟ್ಟೆ<http://kn.wikipedia.org/wiki/%20%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%85%E0%B2%B0%E0%B2%B3%E0%B2%BF%20%E0%B2%95%E0%B2%9F%E0%B3%8D%E0%B2%9F%E0%B3%86>

ಚರ್ಚೆಯು ಅಲ್ಲಿ ಮುಂದುವರೆಯಲಿ.

ಧನ್ಯವಾದಗಳು,
- ಮನ


On 8/26/06, H P Nadig <hpnadig at gmail.com> wrote:

> On Sat, 2006-08-26 at 16:50 -0500, K.N. Manohar wrote:
>
>
> > namespace ಪ್ರಸ್ತಾವನೆ ಬರುವುದು, ಪ್ರತಿಯೊಂದು ಚಲನಚಿತ್ರ ಲೇಖನಕ್ಕೂ, ಅದು
> > ಚಲನಚಿತ್ರದ ಬಗ್ಗೆಯ ಲೇಖನ ಎಂದು ಶೀರ್ಷಿಕೆಯಲ್ಲಿಯೇ ತಿಳಿಯಬೇಕು ಎಂದಾದಲ್ಲಿ ಮಾತ್ರ.
> > ಇದನ್ನು ಕಾರ್ಯನೀತಿ ಪುಟದಲ್ಲಿ ನಡೆದ ಚರ್ಚೆಯಲ್ಲಿಯೂ ಬರೆದಿದ್ದೆ.
>
> ನಿಮ್ಮ ಪ್ರಕಾರ ಅದು ಯಾವಾಗ ಬರುತ್ತದೋ ನನಗೆ ತಿಳಿದಿಲ್ಲ ಸ್ವಾಮಿ. ನೀವು "ಚಲನಚಿತ್ರ"
> ಪುಟಗಳಿಗೆ ಹೊಸ namespace ಬೇಕು ಎಂದು ಬರೆದದ್ದಕ್ಕೆ ಉತ್ತರವಾಗಿ "ಮೇಯ್ಲಿಂಗ್
> ಲಿಸ್ಟಿನಲ್ಲಿ ಚರ್ಚಿಸೋಣ" ಎಂದೆ. ಕಾರ್ಯನೀತಿಯೊಂದನ್ನು ಇಲ್ಲಿ ಚರ್ಚಿಸೋಣವೆಂದು
> ಹೇಳಲಿಲ್ಲ.
>
> ನಾವೀಗ ಚರ್ಚಿಸುತ್ತಿರುವ ಶೀರ್ಷಿಕೆಯೊಂದಿಗೆ "ಚಲನಚಿತ್ರ" ಸೇರಿಸಬೇಕೋ ಬೇಡವೋ ಎಂಬುವ
> ವಿಷಯ ನ್ಯಾಯವಾಗಿ ವಿಕಿಪೀಡಿಯದ ಕಾರ್ಯನೀತಿ ಪುಟದಲ್ಲಿಯೇ ನಡೆಯಬೇಕು. ನಡೆದ ಚರ್ಚೆ ಒಂದೇ
> ಕಡೆ ಆರ್ಕೈವಿನಲ್ಲಿ ಲಭ್ಯವಿದ್ದಲ್ಲಿ ಒಳಿತು.
>
> >  ಆದುದರಿಂದ ಮೊದಲು: ಎಲ್ಲಾ ಚಲನಚಿತ್ರ ಲೇಖನಗಳ ಶೀರ್ಷಿಕೆಯಲ್ಲಿಯೇ 'ಚಲನಚಿತ್ರ' ಎಂದು
> > ಬರೆಯುವ ವಿಚಾರವು ಇತ್ಯರ್ಥವಾಗಬೇಕಿದೆ. ಎಲ್ಲ ಪುಟಗಳಿಗೂ ಆ ರೀತಿ ಬದಲಾಯಿಸುವ
> > ಅವಶ್ಯಕತೆಯಿಲ್ಲ ಎಂದಾದರೆ, ಪ್ರತ್ಯೇಕ namespace ಪ್ರಶ್ನೆಯೆ ಉದ್ಭವಿಸುವುದಿಲ್ಲ.
>
> ಇದನ್ನು "ಇತ್ಯರ್ಥ"  ಮಾಡಬೇಕಾಗಿರುವುದು ಕಾರ್ಯನೀತಿ ಪುಟದಲ್ಲಿ. ಮುಂದಿನ ಉತ್ತರ ನಾನು
> ಮೇಯ್ಲಿಂಗ್ ಲಿಸ್ಟಿನಲ್ಲಿ ನೀಡುವುದಿಲ್ಲ. ಈ ಚರ್ಚೆಯನ್ನು ಅಲ್ಲಿಗೇ ವರ್ಗಾಯಿಸಿ.
>
> > ಇಲ್ಲಿ ಯಾವುದು consistency  ಎಂಬ ಪ್ರಶ್ನೆ  ಏಳುತ್ತದೆ.  ಎಲ್ಲಾ ಸಾಹಿತಿಗಳ
> > ಪುಟದಲ್ಲಿ  (ಸಾಹಿತಿ) ಎಂದು,  ಎಲ್ಲಾ ಕ್ರೀಡಾಪಟು  ಲೇಖನದ ಹೆಸರಿನಲ್ಲಿ
> > (ಕ್ರೀಡಾಪಟು) ಎಂದು, ಎಲ್ಲಾ ರಾಜಕಾರಣಿಗಳ ಲೇಖನಗಳ ಹೆಸರಿನಲ್ಲಿ (ರಾಜಕಾರಣಿ)
>
> ಈಗಾಗಲೇ ಹಲವು ಚಲನಚಿತ್ರ ಪುಟಗಳಿಗೆ ಬೇರೊಂದು ವಿಷಯದ ಹೆಸರಿರುರುವುದೆಂದು (ಉದಾ:
> "ಚದುರಂಗ") ನಾವು *ಈಗಾಗಲೇ* ಶೀರ್ಷಿಕೆಯೊಂದಿಗೆ "(ಚಲನಚಿತ್ರ)" ಎಂಬುದನ್ನು
> ಸೇರಿಸುತ್ತಿಲ್ಲವೆ? ಆದ್ದರಿಂದ ಶೀರ್ಷಿಕೆಯಲ್ಲಿ "(ಚಲನಚಿತ್ರ)" ಎಂಬುದನ್ನು ಸೇರಿಸುವ
> ಮಟ್ಟಿಗೆ ನಾವುಗಳು ಒಪ್ಪಿಕೊಂಡಾಗಿದೆ.
> ಈಗ ಅದನ್ನು ಎಲ್ಲ ಚಲನಚಿತ್ರ ಪುಟಗಳಿಗೆ ಸೇರಿಸಿದಲ್ಲಿ 'ಯಾವುದಕ್ಕೆ ಸೇರಿಸಬೇಕು
> ಯಾವುದಕ್ಕೆ ಸೇರಿಸಬಾರದು' ಎಂಬುದರ ಬಗ್ಗೆ ಸದಸ್ಯರಿಗೆ
> ತಲೆಕೆಡಿಸಿಕೊಳ್ಳಬೇಕಾಗುವುದಿಲ್ಲ. consistencyಯೂ ಹೆಚ್ಚುತ್ತದೆ.
>
> > ಎಂದು, ಎಲ್ಲಾ ದೇಶಗಳ ಲೇಖನದ ಹೆಸರಿನಲ್ಲಿ (ದೇಶ) ಎಂದು, ಇತ್ಯಾದಿಯಾಗಿ ಸೇರಿಸುವ
> > ಯೋಜನೆಯಿದ್ದಲ್ಲಿ, ಎಲ್ಲಾ ಚಲನಚಿತ್ರಗಳಿಗೂ (ಚಲನಚಿತ್ರ) ಎಂದು ಹಾಕಬಹುದು. ಆಗ
> > consistency ಇರುತ್ತದೆ.
>
> ನೀವು ಬಹುಶಃ ಒಂದು ಅಂಶ ಮರೆಯುತ್ತಿದ್ದೀರಿ. ಕೇವಲ ೩೦೦೦+ ಲೇಖನಗಳಿರುವ ಕನ್ನಡ
> ವಿಕಿಪೀಡಿಯದಲ್ಲಿ ೧೫೦೦ಕ್ಕೂ ಹೆಚ್ಚು "ಚಲನಚಿತ್ರ" ಕುರಿತ stubಗಳೇ ಇವೆ! (ಚುಟುಕು
> ಲೇಖನಗಳು).
> ಈ ಚುಟುಕು ಲೇಖನಗಳಲ್ಲಿ ಬರಿಯ ಶೀರ್ಷಿಕೆಯೊಂದನ್ನು ಸೇರಿಸಿ ಅದರೊಂದಿಗೆ infobox
> ಒಂದನ್ನು ಸೇರಿಸಿ ಬಿಟ್ಟುಬಿಡಲಾಗಿದೆ. ಕೇವಲ ೩೦೦೦ ಲೇಖನಗಳಿರುವ ವಿಕಿಯೊಂದರಲ್ಲಿ
> ಇಷ್ಟೊಂದು ಚಲನಚಿತ್ರ stubಗಳು ಈ ರೀತಿ ಸೇರ್ಪಡೆಯಾಗುತ್ತಿರುವುದು ಬಹುಶಃ ಕನ್ನಡ
> ವಿಕಿಯೊಂದರಲ್ಲೆ. ಅಂತಹ ಪುಟಗಳಲ್ಲಿ "ಇದೊಂದು ಚಲನಚಿತ್ರ" ಎಂಬ ಒಂದು ವಾಕ್ಯ ಕೂಡ
> ಇಲ್ಲ!
>
> random ಲೇಖನ ಲಿಂಕ್ ಕ್ಲಿಕ್ಕಿಸಿದರೆ ಐದರಲ್ಲಿ ನಾಲ್ಕು ಬಾರಿ ಇದೇ ಚಲನಚಿತ್ರದ
> stubಗಳು ಓದಲು ಸಿಗುತ್ತವೆ. ಚಲನಚಿತ್ರಗಳ ಹೆಸರುಗಳು ಸಂಸ್ಕೃತಿಯ ಹಲವು ಕೋನಗಳಿಂದ
> ಬಂದಿರುತ್ತವೆ.  ಓದುಗರಿಗೆ ದಿಢೀರನೆ
>
> "ಮನೇಲಿ ರಾಮಣ್ಣ ಬೀದೀಲಿ ಕಾಮಣ್ಣ"
> "ಅಳಿಯ ಮನೆ ತೊಳಿಯ"
> "ಎಕ್ಸ್ ಕ್ಯೂಸ್ ಮಿ"
>
> ಎಂದೆಲ್ಲ ಪುಟಗಳು ಎದುರಾದರೆ ವಿಕಿಪೀಡಿಯದಲ್ಲಿ ಓದುಗರ ಅಚ್ಚರಿ ನೀವೇ ಊಹಿಸಿಕೊಳ್ಳಿ.
> ವಿಕಿಪೀಡಿಯ ಮಾಹಿತಿಯ ಭಂಡಾರವಾಗಬೇಕಾದ ಪ್ರಾಜೆಕ್ಟು. ಇಲ್ಲಿ ವಿಶ್ವಕೋಶವೊಂದನ್ನು ಓದಿದ
> ಅಥವ ಅದರ ಹತ್ತಿರದ ಅನುಭವ ಓದುಗರಿಗಾಗಬೇಕು.
>
> >
> --
> http://hpnadig.net/blog/
>
> "Creativity requires the courage to let go of certainties." ~ Erich
> Fromm
>
> _______________________________________________
> Wikikn-l mailing list
> Wikikn-l at Wikipedia.org
> http://mail.wikipedia.org/mailman/listinfo/wikikn-l
>
-------------- next part --------------
An HTML attachment was scrubbed...
URL: http://lists.wikimedia.org/pipermail/wikikn-l/attachments/20060827/0e428357/attachment.htm 


More information about the Wikikn-l mailing list