[Wikikn-l (kannada wikipedia)] ಕನ್ನಡ ವಿಕಿಪೀಡಿಯದಲ್ಲಿ ಚಲನಚಿತ್ರ ಮಾಹಿತಿ ಪುಟಗಳು

Talaku Srinivas tvsrinivas41 at gmail.com
Sat Aug 26 17:52:21 UTC 2006


ಮನ ಅವರೇ ನೀವು ಹೇಳ್ತಿರೋ ವಿಷಯದಲ್ಲಿ ನನ್ನದೂ ಸಹಭಾಗಿತ್ವ ಇದೆ.  ನನ್ನ ಚಿಂತನೆಗಳೂ ಇದೇ
ದಿಕ್ಕಿನಲ್ಲಿವೆ.

ನೀವು ತಿಳಿಸಿದಂತೆಯೇ ಆಗಲಿ.


On 8/26/06, K.N. Manohar <knmanohar at gmail.com> wrote:
>
> The following text is in Kannada unicode. If you are not able to see it
> properly, please refer to this page:
> http://kn.wikipedia.org/wiki/Wikipedia:Kannada_Support
>
>
> ====================
>
> ಗೆಳೆಯರೆ,
>
> ಎಲ್ಲರಿಗೂ ಗೌರಿ ಮತ್ತು ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!
>
> ವಿವಿಧ ಕನ್ನಡ ಚಲನಚಿತ್ರಗಳ ಬಹಳಷ್ಟು ಲೇಖನಗಳು ವಿಕಿಪೀಡಿಯದಲ್ಲಿ ಸ್ಥಾಪನೆಯಾಗಿವೆ.
> ಲೇಖನದ ಹೆಸರಿನಲ್ಲಿ   '(ಚಲನಚಿತ್ರ)' ಎಂದು ಸೇರಿಸಬೇಕೆ? ಬೇಡವೆ? ಸೇರಿಸಬೇಕೆಂದಿದ್ದರೆ
> ಯಾವಾಗ ಸೇರಿಸಬೇಕು? ಯಾವಾಗ ಸೇರಿಸುವ ಅವಶ್ಯಕತೆಯಿಲ್ಲ? ಎಂಬುದು ಚರ್ಚೆಯಾಗಬೇಕಿದೆ.
> ಇದರ ಬಗ್ಗೆ ಅರಳಿಕಟ್ಟೆಯಲ್ಲಿ ಚರ್ಚೆ ಪ್ರಾರಂಭವಾಗಿ, ಕೊನೆಗೆ ಈ mailing-listನಲ್ಲಿ
> ಚರ್ಚೆಯಾಗಲಿ, ಇತರರ ಅಭಿಪ್ರಾಯವೂ ಧ್ವನಿಗೂಡಲಿ ಎಂದು ನಿರ್ಧಾರವಾಯಿತು. ಅದರ ಫಲವೇ, ಈ ಅಂಚೆ.
>
> ನನ್ನ ಅಭಿಪ್ರಾಯ ಹೀಗಿದೆ:
> ಚಲನಚಿತ್ರಗಳ ಹೆಸರು ವ್ಯಕ್ತಿ, ಊರು, ವಿಷಯ/ವಸ್ತುವಿನ ಹೆಸರಾಗಿದ್ದು, ಆ ಹೆಸರಿನ ಲೇಖನ
> ವಿಕಿಪೀಡಿಯದಲ್ಲಿ ಬರುವ ಸಾಧ್ಯತೆ  ಇದ್ದಲ್ಲಿ ''' (ಚಲನಚಿತ್ರ)''' ಎಂದು ಸೇರಿಸಬೇಕು.
> ಉದಾಹರಣೆ: ಧೂಮಕೇತು (ಚಲನಚಿತ್ರ), ರಣಧೀರ ಕಂಠೀರವ (ಚಲನಚಿತ್ರ), ಇಮ್ಮಡಿ ಪುಲಿಕೇಶಿ
> (ಚಲನಚಿತ್ರ), ಕಿತ್ತೂರು ಚೆನ್ನಮ್ಮ (ಚಲನಚಿತ್ರ), ಚದುರಂಗ (ಚಲನಚಿತ್ರ), ಉಪೇಂದ್ರ
> (ಚಲನಚಿತ್ರ) ಇತ್ಯಾದಿ.
>
> ''(ಚಲನಚಿತ್ರ)'' ಎಂದು ಸೇರಿಸದೆ ಇರುವ ಲೇಖನಗಳು, ಆಯಾ ವಸ್ತು, ವ್ಯಕ್ತಿ, ವಿಷಯಗಳ
> ಬಗ್ಗೆಯಾದ್ದಾಗಿರುತ್ತದೆ.  ಮೇಲ್ಕಾಣಿಸಿದ ಲೇಖನಗಳ ಹೆಸರುಗಳು (ಚಲನಚಿತ್ರ) ಎಂದು ಸೇರಿಸದೆ
> ಇದ್ದಾಗ ಈ ಕೆಳಕಂಡ ಲೇಖನಗಳಾಗಿರುತ್ತವೆ:
>
> ಧೂಮಕೇತು -> ಬಾಹ್ಯಾಕಾಶ ವಸ್ತುವಿನ ಬಗ್ಗೆ
> ರಣಧೀರ ಕಂಠೀರವ -> ಕನ್ನಡದ ಅರಸನ ಬಗ್ಗೆ
> ಇಮ್ಮಡಿ ಪುಲಿಕೇಶಿ -> ಚಾಲುಕ್ಯರ ದೊರೆ ಎರಡನೆ ಪುಲಿಕೇಶಿಯ ಬಗ್ಗೆ
> ಕಿತ್ತೂರು ಚೆನ್ನಮ್ಮ -> ಕಿತ್ತೂರಿನ ವೀರವನಿತೆ, ಮಲ್ಲಸರ್ಜನ ಹೆಂಡತಿ, ಚೆನ್ನಮ್ಮ ಅವರ
> ಬಗ್ಗೆ
> ಚದುರಂಗ -> ಸಾಹಿತಿ ಚದುರಂಗ ಅವರ ಬಗ್ಗೆ.
> ಚದುರಂಗ (ಆಟ) -> ಚದುರಂಗದ ಆಟದ ಬಗ್ಗೆ (chess)
> ಉಪೇಂದ್ರ -> ನಟ, ನಿರ್ದೇಶಕ, ಉಪೇಂದ್ರ ಅವರ ಬಗ್ಗೆ
>
> ಉಳಿದ ಚಿತ್ರಗಳಿಗೆ, ''' (ಚಲನಚಿತ್ರ)''' ಎಂದು ಹಾಕುವ ಅವಶ್ಯಕತೆಯಿರುವುದಿಲ್ಲ, ಅಲ್ಲವೆ?
>
> ಉದಾಹರಣೆ:  ನಂಜುಂಡಿ ಕಲ್ಯಾಣ, ಗೋವಾದಲ್ಲಿ ಸಿ.ಐ.ಡಿ. ೯೯೯, ನಕ್ಕರೆ ಅದೇ ಸ್ವರ್ಗ, ಅವಳೇ
> ನನ್ನ ಹೆಂಡತಿ, ಕುಂಕುಮ ತಂದ ಭಾಗ್ಯ, ಬಲು ಅಪರೂಪ ನಮ್ಮ ಜೋಡಿ, ಸೋತು ಗೆದ್ದವಳು, ಕಿಟ್ಟು
> ಪುಟ್ಟು  ಮುಂತಾದ ಪುಟಗಳನ್ನು ಅದೇ ಹೆಸರಿನಲ್ಲಿಡಬಹುದೆಂದು ನನ್ನ ಅಭಿಪ್ರಾಯ.
> ಈ ಹೆಸರುಗಳಲ್ಲಿ ಬೇರಾವುದೇ ಲೇಖನಗಳು ಬರಲು ಸಾಧ್ಯತೆಗಳು ಅತ್ಯಂತ ಕಡಿಮೆ ಅಥವಾ ಇಲ್ಲವೇ
> ಇಲ್ಲ. ಹಾಗೆ ಬಂದರೂ ಆಗ ದ್ವಂದ್ವನಿವಾರಣೆ(disambiguation) ತಂತ್ರವನ್ನು ಅನುಸರಿಸಬಹುದು.
>
> ಈ ವಿಚಾರದಲ್ಲಿ ನಿಮ್ಮೆಲ್ಲರ ಅಭಿಪ್ರಾಯದ ಅವಶ್ಯಕತೆ ಇದೆ. ದಯವಿಟ್ಟು ತಿಳಿಸಿರಿ.
>
> ಧನ್ಯವಾದಗಳು,
> - ಮನ
>
>
> _______________________________________________
> Wikikn-l mailing list
> Wikikn-l at Wikipedia.org
> http://mail.wikipedia.org/mailman/listinfo/wikikn-l
>
>
>


-- 
---
ಇಂತಿ ವಂದನೆಗಳೊಂದಿಗೆ
---
ತವಿಶ್ರೀನಿವಾಸ (ತವಿಶ್ರೀ)
http://asraya.net
-------------- next part --------------
An HTML attachment was scrubbed...
URL: http://lists.wikimedia.org/pipermail/wikikn-l/attachments/20060826/7a7f56d8/attachment.htm 


More information about the Wikikn-l mailing list