ಎಲ್ಲರಿಗೂ ನಮಸ್ಕಾರ,

                ವಿಕಿಪೀಡಿಯಾದಲ್ಲಿ ಹಲವು ಹೊಸ ಸಂಪಾದಕರನ್ನು ಕಾಣುತ್ತಿರುವುದು ಸಂತೋಷದ ವಿಷಯ. ವಾರದ ಸಹಯೋಗ ಸದ್ಯಕ್ಕೆ  ಬೇರೆ ಲೇಖನದೆಡೆಗೆ  ನಡೆದಿಲ್ಲ.  ಸಾಧ್ಯವಾದಲ್ಲಿ  ಏಪ್ರಿಲ್ ನಲ್ಲಿ  ಎರಡು ಸಹಯೋಗವಾದರೂ ನಡೆಸಲು ಪ್ರಯತ್ನಿಸೋಣ.

ಈ ತಿಂಗಳು,
ಗಣಕಯಂತ್ರ ದ ಬಗೆಗೆ ಸಚಿತ್ರ ಲೇಖನವೊಂದನ್ನು ಬಸವರಾಜ ತಳವಾರರವರು ಬರೆದಿದ್ದಾರೆ. ನಾಗಭೂಷಣ ಸ್ವಾಮಿಯವರು ಆದಿಕವಿ ಪಂಪನ ಬಗ್ಗೆ ಬರೆದಿರುವರು. ಇಂತಹ  ಲೇಖನಗಳು ಅಭಿನಂದನಾರ್ಹ. 

ಹಾಗೆಯೇ ನಕ್ಷೆಗಳನ್ನು, ಚಿತ್ರಣಗಳನ್ನು ಆಯಾ ಭಾಷೆಗಳಲ್ಲೇ ಇರಿಸುವ ವಿಕಿ ಸಂಪ್ರದಾಯದಂತೆ
http://kn.wikipedia.org/wiki/Image:ಗಣಕಯಂತ್ರದ ಘಟಕಗಳು.jpg
ಚಿತ್ರವನ್ನು ಜಿಂಪ್ ಮುಖಾಂತರ ಕನ್ನಡಕ್ಕೆ ಅವತರಣ ಮಾಡಿರುವೆ, ಆದರೆ ಉಳಿದೆರಡು ಶಬ್ಧಗಳಿಗೆ ಕನ್ನಡ ಪದಗಳು ಸಿಗಲಿಲ್ಲ...
೧) Arithmetic Logic unit
೨) Control unit
ನಿಮಗೆ ತಿಳಿದಿದ್ದಲ್ಲಿ ಕಳುಹಿಸಿ. :)

- ಹರಿ ಪ್ರಸಾದ್ ನಾಡಿಗ್

-
http://www.hpnadig.net/

'Tis the gift to be simple, 'tis the gift to be free,
'Tis the gift to come down where we ought to be,
And when we find ourselves in the place just right,
'Twill be in the valley of love and delight.
~ Joseph Brackett ~